ಹೊಸ ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ ಮಾಲಾಶ್ರೀ | Filmibeat Kannada

2017-11-18 3

ಹೊಸ ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ ಮಾಲಾಶ್ರೀ:ನಟಿ ಮಾಲಾಶ್ರೀ ಅಭಿನಯದ 'ಉಪ್ಪು ಹುಳಿ ಕಾರ' ಸಿನಿಮಾ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ಆ ಚಿತ್ರದ ನಂತರ ಮಾಲಾಶ್ರೀ ಎರಡು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಮೊದಲು ಕನಸಿನ ರಾಣಿ ನಂತರ ಆಕ್ಷನ್ ಕ್ವೀನ್ ಅಂತ ಕರೆಸಿಕೊಂಡಿದ್ದ ಮಾಲಾಶ್ರೀ ಈಗ ವಿಭಿನ್ನ ಪಾತ್ರ ಮಾಡುವ ಮನಸು ಮಾಡಿದ್ದಾರೆ. ಈ ಬಾರಿ ಹಾರರ್ ಚಿತ್ರಕ್ಕೆ ಕೈ ಹಾಕಿರುವ ಮಾಲಾಶ್ರೀ ತಮ್ಮ ಪಾತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.ಡಿಫರೆಂಟ್ ಕಥೆ ಇರುವ ಈ ಹಾರರ್, ಸಿನಿಮಾದಲ್ಲಿ ನಟಿಸುವುದಕ್ಕೆ ಮಾಲಾಶ್ರೀ ಕೂಡ ತುಂಬ ಉತ್ಸುಕರಾಗಿದ್ದಾರೆ. ಚಿತ್ರದ ಕಥೆ ಅವರಿಗೆ ತುಂಬ ಇಷ್ಟ ಆಗಿದ್ದು, ನಟಿಸುವುದಕ್ಕೆ ಓಕೆ ಎಂದಿದ್ದಾರೆ. ಈಗಾಗಲೇ ಆ ಪಾತ್ರಕ್ಕಾಗಿ ತಯಾರಿ ಶುರುವಾಗಿದ್ದು, 9 ಕೆಜಿ ತೂಕ ಕಡಿಮೆ ಮಾಡಿದ್ದಾರಂತೆ. ಅಂದಹಾಗೆ, ಮಾಲಾಶ್ರೀ ಅವರ ಈ ಎರಡು ಹೊಸ ಚಿತ್ರಗಳು ಅವರ ರಾಮು ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆ.ನಟಿ ಮಾಲಾಶ್ರೀ ಅಭಿನಯದ 'ಉಪ್ಪು ಹುಳಿ ಕಾರ' ಸಿನಿಮಾ ಮುಂದಿನ ಶುಕ್ರವಾರ ತೆರೆಗೆ ಬರಲಿದೆ.

malashree starring "uppu huli kara" will be on bigg screen from next week,as she acting in 2 more movies malashree have reduce 9kg of weight, first malashree dream queen, now action queen ,watch this video

Videos similaires